ಬ್ಲೂಮ್ಫಾಂಟೇನ್

ಬ್ಲೂಮ್‍ಫಾಂಟೇನ್
	ದಕ್ಷಿಣ ಆಫ್ರಿಕದ ಆರೆಂಜ್ ಫ್ರಿಸ್ಟೇಟ್ ಪ್ರಾಂತ್ಯದ ರಾಜಧಾನಿ. ಪದದ ಅರ್ಥ ಹೂಗಳ ಚಿಲುಮೆ, ಕೇಪ್‍ಟೌನಿನ ಈಶಾನ್ಯಕ್ಕೆ ಸುಮಾರು 970 ಕಿಮೀ ದೂರದಲ್ಲಿ ಇದೆ. ವಿಸ್ತೀರ್ಣ 180-179 ಚಕಿಮೀ. ಜನಸಂಖ್ಯೆ 198-282 (1975).
	ಆಫ್ರಿಕಾನ ಅಧಿಕೃತ ಭಾಷೆ. ಬಿಳಿಯಗಿಂತ ಆಫ್ರಿಕದ ಕಪ್ಪು ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವಿಶ್ವವಿದ್ಯಾಲಯ. ಕೃಷಿವಿಜ್ಞಾನಶಾಲೆ ಹಾಗೂ ಎರಡು ವೇಧಶಾಲೆ ಹಾಗೂ ಉಚ್ಚನ್ಯಾಯಾಲಯ ಇದೆ. ಕೃಷಿ, ಮಾರುಕಟ್ಟೆ ವ್ಯಾಪಾರ ವಾಣಿಜ್ಯ ಇವುಗಳ ಕೇಂದ್ರವೂ ಆಗಿದೆ. 1845ರಲ್ಲಿ ಈ ನಗರವನ್ನು ಆಫ್ರಿಕನರು ಸ್ಥಾಪಿಸಿದರು. ಬೋಯರ್ ಯುದ್ಧದ (1960) ಸಮಯದಲ್ಲಿ ಬ್ರಿಟಿಷ್ ಸೈನ್ಯ ಇದನ್ನು ಆಕ್ರಮಿಸಿಕೊಂಡಿತ್ತು.	
						*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ